‘ಗಂಗಾ’ ಯು/ಎ, 25.10.2015 ಬಿಡುಗಡೆ
Posted date: 17 Thu, Sep 2015 – 05:41:54 PM

ಹೆಸರಾಂತ ನಿರ್ಮಾಪಕ ರಾಮು ಅವರ ರಾಮು ಫಿಲಮ್ಸ್‌ನ ೩೯ನೇ ಕನ್ನಡ ಸಿನಿಮಾ ‘ಗಂಗಾ’. ಮಾಲಾಶ್ರೀ ಅಭಿನಯದ, ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರ ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಅರ್ಹತಾ ಪತ್ರವನ್ನು ಪಡೆದುಕೊಂಡು ಮುಂದಿನ ತಿಂಗಳ ದಸರಾ ಉತ್ಸವದ ಸಂದರ್ಭದಲ್ಲಿ 25.10.2015 ಬಿಡುಗಡೆಗೆ ಆಣಿಯಾಗುತ್ತಿದೆ.
ನಿರ್ದೇಶಕ ಓಂ ಸಾಯಿ ಪ್ರಕಾಶ್ ಮಾಲಾಶ್ರೀಯವರ ಫ್ಯಾಮಿಲಿ ಇಮೇಜ್ ಹಾಗೂ ಮಾಸ್ ಇಮೇಜ್‌ಗಳನ್ನು ಬೆರೆಸಿ ‘ಗಂಗಾ’ ಚಿತ್ರ ತಯಾರಿಸಿದ್ದಾರೆ. ಸಾಯಿಪ್ರಕಾಶ್ ಈ ಹಿಂದೆ ಮಾಲಾಶ್ರೀ ಅಭಿನಯದ ‘ಹಲೋ ಸಿಸ್ಟರ್, ‘ಪೋಲಿಸನ ಹೆಂಡತಿ, ‘ಗೃಹಪ್ರವೇಶ ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರದ್ದೀ ಚಿತ್ರದಲ್ಲಿ ಲಾಂಗ್ ಗ್ಯಾಪಿನ ನಂತರ ಸೀರೆಯಲ್ಲಿ ಕಾಣಿಸಿಕೊಂಡಿರುವ ಮಾಲಾಶ್ರೀ ಮಧ್ಯಂತರದ ನಂತರ ವೈರಿಗಳಿಗೆ ಸರಿಯಾಗಿ ತದಕುವ ಸನ್ನಿವೇಶಗಳನ್ನು ಸಹ ಪ್ರೇಕ್ಷಕರು ವೀಕ್ಷಿಸಬಹುದು.
ಪೋಷಕ ಪಾತ್ರಗಳಲ್ಲಿ ಶ್ರೀ ನಿವಾಸಮೂರ್ತಿ, ಸತ್ಯಪ್ರಕಾಶ್, ಕೋಟೆ ಪ್ರಭಾಕರ್, ರವಿ ಚೇತನ್, ಪವಿತ್ರ ಲೋಕೇಶ್, ಹೇಮ ಚೌಧರಿ, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ಸಾಧು ಕೋಕಿಲ ಮತ್ತಿತರರು ಅಭಿನಯಿಸಿದ್ದಾರೆ.
ರಾಜೇಶ್ ಕಟ್ಟ ಛಾಯಾಗ್ರಹಣ, ಎಂ.ಆರ್. ಸಂಕಲನ, ಕೆ.ಕಲ್ಯಾಣ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ, ಲಿಂಗರಾಜ್ ಕಗ್ಗಲ್ ಸಹ ನಿರ್ದೇಶನ, ಫಳಣಿ ರಾಜ್ ಸಾಹಸ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed